Posts
Showing posts from January, 2018
- Get link
- X
- Other Apps
ಕನ್ನಡ ತೀರ್ಪುಗಳು ಮುನ್ನುಡಿ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ.ಇದು ಕರ್ನಾಟಕ ರಾಜ್ಯದ ಅಧಿಕೃತ ಭಾಷೆ ಆಗಿದೆ . ೧-೧೧-೧೯೫೬ ಕ್ಕೆ ಕರ್ನಾಟಕ ರಾಜ್ಯ ಉದಯವಾದರೂ, ಕನ್ನಡ ಆಡಳಿತ ಭಾಷೆ ಎಂದು ಘೋಷಿತವಾದರೂ ಆಡಳಿತದಲ್ಲಿ ಕನ್ನಡ ಬಳಕೆ ತ್ರಪ್ತಿಕರವಾಗಿರಲಿಲ್ಲ .ಇನ್ನು ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ೧೯೭೪ ರ ವರೆಗೆ ಅವಕಾಶವೇ ಇರಲಿಲ್ಲ .ಈಗ ನ್ಯಾಯಾಲಯದಲ್ಲಿ ಕನ್ನಡ ಬಳಕೆಗೆ ಸಾಕಷ್ಟು ಅವಕಾಶ ನೀಡಲಾಗಿದೆ .ಆದರೆ ಸಾಕಷ್ಟು ಕನ್ನಡ ಕಾನೂನು ಸಾಹಿತ್ಯ ಲಭ್ಯ ಇಲ್ಲ.ನಾನು ವಕೀಲನಾಗಿ, ನ್ಯಾಯಾಧೀಶನಾಗಿ ಕಾನೂನು ಕ್ಷೇತ್ರದಲ್ಲಿ ಸಾಕಷ್ಟು ಕನ್ನಡ ಬಳಸಿದ್ದೇನೆ. ನಾನು ನ್ಯಾಯಾಧೀಶನಾದರೇ ಪ್ರಥಮ ತೀರ್ಪನ್ನು ಕನ್ನಡದಲ್ಲಿ ನೀಡಬೇಕು ಎಂದು ತೀರ್ಮಾನಿಸಿದ್ದೆ . ಅದರಂತೆ ನನ್ನ ಮೊದಲ ತೀರ್ಪನ್ನ ಕನ್ನಡದಲ್ಲಿ ನೀಡಿದ್ದೇನೆ.ನಾನು ನಿವೃತ್ತನಾಗುವವರೆಗೆ ಸುಮಾರು ೨೦೦೦ ತೀರ್ಪುಗಳನ್ನು ಕನ್ನಡದಲ್ಲಿ ನೀಡಿದ್ದೇನೆ. ಕನ್ನಡದಲ್ಲಿ ಕಾನೂನು ಸಾಹಿತ್ಯ ಕೊರತೆ ನೀಗಿಸುವಲ್ಲಿ ನನ್ನ ತೀರ್ಪುಗಳು ಕೊಂಚ ಸಹಕಾರಿ ಯಾಗಬಹುದು. ಈ ತೀರ್ಪು ಗಳು ಬೇರೆ ಬೇರೆ ಹಂತಗಳಲ್ಲಿ ಮೇಲ್ಮನವಿಯಲ್ಲಿ ಮಾರ್ಪಾಡು ಆಗಿರುಬಹುದಾಗಿದೆ ಕಾರಣ ಈ ತೀರ್ಪುಗಳನ್ನು ಕೇವಲ ಭಾಷೆ ಬಳಕೆ ದ್ರಿಷ್ಟಿಯಿಂದ ಮಾತ್ರ ಬಳಸಬಹ...